ಮಾಧ್ಯಮ ನಿರ್ಲಕ್ಷಿತ ಸಮುದಾಯ ಎಂದರೆ ದಿನಪತ್ರಿಕೆಗಳು ಅಥವಾ ಇತರೆ ಪತ್ರಿಕೆಗಳ ಮೂಲಕ ಮುಂದೆಂದೂ ಪ್ರಸಾರವಾಗದ ಸಮುದಾಯ. ೨೦೦೦ ಮತ್ತು ೨೦೧೦ ರ ದಶಕಗಳಲ್ಲಿ ನೂರಾರು ದಿನಪತ್ರಿಕೆಗಳು ಮತ್ತು ವಾರಪತ್ರಿಕೆಗಳನ್ನು ಮುಚ್ಚಿದ ನಂತರ ಅಮೆರಿಕದಲ್ಲಿ ಈ ಪದವು ಹೊರಹೊಮ್ಮಿತು. ಯುಎನ್‌ಸಿ ಸ್ಕೂಲ್ ಆಫ್ ಮೀಡಿಯಾ ಅಂಡ್ ಜರ್ನಲಿಸಂ ೨೦೧೮ ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಯುಎಸ್‌ನಲ್ಲಿ ೧,೩೦೦ ಕ್ಕೂ ಹೆಚ್ಚು ಸಮುದಾಯಗಳನ್ನು ಮಾಧ್ಯಮ ನಿರ್ಲಕ್ಷಿತ ಸಮುದಾಯವೆಂದು ಪರಿಗಣಿಸಲಾಗಿದೆ. == ಹಿನ್ನೆಲೆ == "ಮಾಧ್ಯಮ ನಿರ್ಲಕ್ಷಿತ ಸಮುದಾಯ" ಎಂಬ ಪದವನ್ನು ೧೯೮೦ ರ ಆರಂಭದಲ್ಲಿ ಕೆನಡಾದ ವೃತ್ತಪತ್ರಿಕೆ ಪ್ರಸಾರ ಮತ್ತು ಲಭ್ಯತೆಯ ಸಾಮಾನ್ಯ ಸ್ವರೂಪವನ್ನು ವಿವರಿಸಲು ಬಳಸಲಾಯಿತು. ಸ್ಥಳೀಯರಿಗೆ ಇದು ಸುದ್ದಿಗಳ ಮೂಲವಾಗಿತ್ತು. ಆದರೆ ೨೧ ನೇ ಶತಮಾನದಲ್ಲಿ ಈ ಪದದ ಬಳಕೆಯ ಅರ್ಥ ವ್ಯತಿರಿಕ್ತವಾಗಿದೆ, ಇದು ಪ್ರಾಥಮಿಕವಾಗಿ ಸುದ್ದಿ ಪ್ರಸಾರದಲ್ಲಿನ ಕೊರತೆಗಳು ಹಾಗು ಸುದ್ದಿಗಳನ್ನು ಕಡಿತಗೊಳಿಸಲು ಬಳಸಲಾಯಿತು. ಯು.ಎಸ್‌ನಲ್ಲಿ ಒಟ್ಟು ಪತ್ರಿಕೆಗಳ ಸಂಖ್ಯೆ ೨೦೦೪ ರಲ್ಲಿ ೮,೮೯೧ ರಿಂದ ೨೦೧೮ ರಲ್ಲಿ ೭,೧೨೨ ಕ್ಕೆ ಇಳಿದಿದೆ. ಇದು ೬೦ ಕ್ಕೂ ಹೆಚ್ಚು ದಿನಪತ್ರಿಕೆಗಳನ್ನು ಒಳಗೊಂಡಂತೆ ೧,೭೭೯ ಪತ್ರಿಕೆಗಳ ಕುಸಿತವನ್ನು ಸೂಚಿಸುತ್ತದೆ. ಉಳಿದ ಪ್ರಕಟಣೆಗಳಲ್ಲಿ, ಅಂದಾಜು ೧,೦೦೦ ರಿಂದ ೧,೫೦೦ ಪತ್ರಿಕೆಗಳು ತಮ್ಮ ಸುದ್ದಿ ಪ್ರಸಾರವನ್ನು ಕಡಿಮೆ ಮಾಡಿದ ನಂತರ ಅವುಗಳನ್ನು ಘೋಸ್ಟ್ ಪತ್ರಿಕೆಗಳೆಂದು ಪರಿಗಣಿಸಲಾಗಿತ್ತು. == ವಿಸ್ತಾರ == ೨೦೧೭ ರಲ್ಲಿ, ಕೊಲಂಬಿಯಾ ಜರ್ನಲಿಸಂ ರಿವ್ಯೂ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಮಾಧ್ಯಮ ನಿರ್ಲಕ್ಷಿತ ಸಮುದಾಯಗಳ ನಕ್ಷೆಯನ್ನು ಬಿಡುಗಡೆ ಮಾಡಿತು. ಸುಮಾರು ೧೩ ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಟೆಕ್ಸಾಸ್ನ ಕೊಲಿನ್ ಕೌಂಟಿ ಮತ್ತು ವಿಲಿಯಮ್ಸನ್ ಕೌಂಟಿ ದೇಶದ ಅತಿದೊಡ್ಡ ಮಾಧ್ಯಮ ನಿರ್ಲಕ್ಷಿತ ಸಮುದಾಯಗಳಲ್ಲಿ ಸೇರಿವೆ ಎಂದು ತೋರಿಸಿದೆ. ಇತರ ಮಾಧ್ಯಮ ನಿರ್ಲಕ್ಷಿತ ಸಮುದಾಯಗಳೆಂದರೆ ಟೆಕ್ಸಾಸ್ನ ಎಲ್ಲಿಸ್ ಕೌಂಟಿ ಮತ್ತು ಉತ್ತರ ಕೆರೊಲಿನಾದ ಅಲಾಮನ್ಸ್ ಕೌಂಟಿ. ಆದಾಗ್ಯೂ, ಈ ಸಮುದಾಯಗಳ ಕೆಲವೇ ಕೆಲವು (೧ % ಕ್ಕಿಂತ ಕಡಿಮೆ) ಸುದ್ದಿಗಳು ಪ್ರಸಾರವಾಗುತ್ತದೆ. ಯುಎನ್‌ಸಿ ಸ್ಕೂಲ್ ಆಫ್ ಮೀಡಿಯಾ ಅಂಡ್ ಜರ್ನಲಿಸಂ ೨೦೧೮ ರಲ್ಲಿ ನಡೆಸಿದ ಅಧ್ಯಯನವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ೧,೩೦೦ ಕ್ಕೂ ಹೆಚ್ಚು ಮಾಧ್ಯಮ ನಿರ್ಲಕ್ಷಿತ ಸಮುದಾಯಗಳನ್ನು ಕಂಡುಹಿಡಿದಿದೆ. ಯು.ಎಸ್‌ನ ೩,೧೪೩ ಕೌಂಟಿಗಳಲ್ಲಿ, ೨,೦೦೦ಕ್ಕೂ ಹೆಚ್ಚು ಕೌಂಟಿಗಳು ದಿನಪತ್ರಿಕೆಗಳನ್ನೇ ಹೊಂದಿರಲಿಲ್ಲ ಮತ್ತು ೩.೨ ದಶಲಕ್ಷ ನಿವಾಸಿಗಳಿರುವ ೧೭೧ ಕೌಂಟಿಗಳು ಯಾವುದೇ ಪತ್ರಿಕೆಯನ್ನು ಹೊಂದಿರಲಿಲ್ಲ. ಅಧ್ಯಯನದ ಪ್ರಕಾರ, ಮಾಧ್ಯಮ ನಿರ್ಲಕ್ಷಿತ ಸಮುದಾಯಗಳಲ್ಲಿ ವಾಸಿಸುವ ಜನರು ಸರಾಸರಿ ಅಮೆರಿಕನ್ನರಿಗಿಂತ ಬಡವರು, ವಯಸ್ಸಾದವರು ಮತ್ತು ಕಡಿಮೆ ವಿದ್ಯಾವಂತರಾಗಿರುತ್ತಾರೆ. ೨೦೧೮ ರ ಹೊತ್ತಿಗೆ, ದಕ್ಷಿಣ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪತ್ರಿಕೆ ಇಲ್ಲದ ೯೦ ಕ್ಕೂ ಹೆಚ್ಚು ಕೌಂಟಿಗಳು ಇದ್ದವು, ಇದು ದೇಶದ ಅತಿದೊಡ್ಡ ಮಾಧ್ಯಮ ನಿರ್ಲಕ್ಷಿತ ಸಮುದಾಯವಾಗಿದೆ. == ಉಲ್ಲೇಖಗಳು ==